ಇದ್ದಾಳೆ, ಇಲ್ಲಿವಳೊಬ್ಬಳು -
ಸದ್ದಿಲ್ಲದಂತೆ ತನ್ನ ಪಯಣ ಸಾಗಿಸುವ
ಮೌನಗೌರಿ !
ಆರ್ಭಟ ಹೆಚ್ಚೆಂದು ಶಪಿತಳಾಗಿ
ಮೂಲೆಗುಂಪಾದ ಪತಿತೆ? ಅಲ್ಲ ಪಾವನೆ.
ಕಡು ಕಾಡು-ಕಣಿವೆಗಳ ದಾಟಿ ಬಂದವಳು,
ಒಡಹುಟ್ಟಿದವಳಿಂದ ದೂರಾಗಿ,
ಕವಲು ದಾರಿಯ ಹಿಡಿದ ಏಕಾಂಗಿ.
ತನ್ನ ಸಣ್ಣ ಬಳುಕುವ ನಡು, ಒಡಲಾಳದ ಚೆಲುವಿಂದಲೇ
ಜಗವ ಸೆಳೆಯಬಲ್ಲ ಕೃಷ್ಣಸುಂದರಿ.
ಆದರೆ -
ಹಾದಿಯುದ್ದಕ್ಕೂ ಇವಳನ್ನು ದೋಚುವವರೇ!!
ನಿರ್ಮಲವಾದ ಇವಳನ್ನು ಹಾಳುಗೆಡವಿ ಬೀಗುವ
ಸಾಧಕರು!!!
ಇವಳು -
ಹಿಡಿದ ಹಾದಿಯೇ ತಪ್ಪಾಗಿರಲು ಯಾರನ್ನು ತಾನೇ
ಶಪಿಸುವಳು?
ಎಲ್ಲ ದೌರ್ಜನ್ಯ ಸಹಿಸುತ್ತ, ಅನ್ಯರ ಮನೆದೀಪ
ಬೆಳಗಿದಳು.
ಬಾಳಹಾದಿಯ ನಡುವೆ ಸೋತು ಮತ್ತೆ ತನ್ನಕ್ಕನ
ಮಡಿಲ ಸೇರಿದಳು.
ಒಂಟಿಪಯಣದ ಹಾದಿ ಮುಗಿಯಿತೆಂದು ಮನದ ಒಳಗೊಳಗೇ
ಹಿಗ್ಗಿ ಉಬ್ಬಿದಳು!
ನಂತರ -
ಸ್ವಂತಿಕೆಯೆ ಕಳೆದು ಹೊರಾಟವಳಿದು,
ತನ್ನ ಹೆಸರನ್ನೂ ಕಳೆದುಕೊಂಡ ನಿತ್ಯ ನಿರಂತರ ಅ'ಭದ್ರೆ' !!!
ಸದ್ದಿಲ್ಲದಂತೆ ತನ್ನ ಪಯಣ ಸಾಗಿಸುವ
ಮೌನಗೌರಿ !
ಆರ್ಭಟ ಹೆಚ್ಚೆಂದು ಶಪಿತಳಾಗಿ
ಮೂಲೆಗುಂಪಾದ ಪತಿತೆ? ಅಲ್ಲ ಪಾವನೆ.
ಕಡು ಕಾಡು-ಕಣಿವೆಗಳ ದಾಟಿ ಬಂದವಳು,
ಒಡಹುಟ್ಟಿದವಳಿಂದ ದೂರಾಗಿ,
ಕವಲು ದಾರಿಯ ಹಿಡಿದ ಏಕಾಂಗಿ.
ತನ್ನ ಸಣ್ಣ ಬಳುಕುವ ನಡು, ಒಡಲಾಳದ ಚೆಲುವಿಂದಲೇ
ಜಗವ ಸೆಳೆಯಬಲ್ಲ ಕೃಷ್ಣಸುಂದರಿ.
ಆದರೆ -
ಹಾದಿಯುದ್ದಕ್ಕೂ ಇವಳನ್ನು ದೋಚುವವರೇ!!
ನಿರ್ಮಲವಾದ ಇವಳನ್ನು ಹಾಳುಗೆಡವಿ ಬೀಗುವ
ಸಾಧಕರು!!!
ಇವಳು -
ಹಿಡಿದ ಹಾದಿಯೇ ತಪ್ಪಾಗಿರಲು ಯಾರನ್ನು ತಾನೇ
ಶಪಿಸುವಳು?
ಎಲ್ಲ ದೌರ್ಜನ್ಯ ಸಹಿಸುತ್ತ, ಅನ್ಯರ ಮನೆದೀಪ
ಬೆಳಗಿದಳು.
ಬಾಳಹಾದಿಯ ನಡುವೆ ಸೋತು ಮತ್ತೆ ತನ್ನಕ್ಕನ
ಮಡಿಲ ಸೇರಿದಳು.
ಒಂಟಿಪಯಣದ ಹಾದಿ ಮುಗಿಯಿತೆಂದು ಮನದ ಒಳಗೊಳಗೇ
ಹಿಗ್ಗಿ ಉಬ್ಬಿದಳು!
ನಂತರ -
ಸ್ವಂತಿಕೆಯೆ ಕಳೆದು ಹೊರಾಟವಳಿದು,
ತನ್ನ ಹೆಸರನ್ನೂ ಕಳೆದುಕೊಂಡ ನಿತ್ಯ ನಿರಂತರ ಅ'ಭದ್ರೆ' !!!
idu kavanane alva??
ReplyDeleteTag ಹಾಕಿದೀನಲ್ಲ, ಸುಮ್ನೆ ಕವನದ್ ಥರ ಅಂತ...
Deleteಮನಸ್ಸಿಗೆ ತೋಚಿದಾಗ ತೋಚಿದ್ದೆಲ್ಲ ಗೀಚೋ ಹುಚ್ಚಿ ನಾನು, ನನ್ನ ಭಾವಗಳಿಗೆ ಒಂದು ಪ್ರಾಸದ ಚೌಕಟ್ಟು ಹಾಕಿ ವ್ಯಕ್ತಪಡಿಸಲು ನನಗೆ ಬಾರದು - ವಸು