ನೆನಪೆಂದರೆ ಸುತ್ತಣ
ವಾಸ್ತವದಿಂದಾಚೆ ದಾಟಿ ನಡೆವ
ಬಾಲ್ಯದ ಎಳೆ ಬಿಸಿಲು..
ದಣಿದ ಮನಕೆ ತ೦ಪನ್ನೆರೆಯುವ
ಬಿದಿಗೆಯ ಚಂದ್ರನ ನೆಳಲು..
ದೂರ ತಾರಲೋಕದೊಳಗಿನಿಂದೆಲ್ಲೋ
ಬಂದು ಮಿಂಚಿ ಮಾಯವಾದ ಉಲ್ಕೆ..
ವರ್ತಮಾನದ ಚಿಂತೆಯ ಸರಿಸಿ
ನಲುಮೆಯುಕ್ಕಿಸುವ ಭಾವಗಳ ಕಾಣ್ಕೆ..
ಕಡಲಿನ ಅಲೆಗಳ ನಡುವೆ ತೇಲಿ
ಬರುವ ನೌಕೆಯ ರೀತಿ
ಮನಸಿನ ಪದರಗಳಾಳದಿಂದ ತೂರಿ
ಬರುವ ನಲ್ಮೆಯ ಪ್ರೀತಿ
ಒಮ್ಮೊಮ್ಮೆ ಮೃದು ಗಂಭೀರ,
ಪ್ರೀತಿ ತುಂಬಿದ ಝೇಂಕಾರ
ಮಗದೊಮ್ಮೆ ಘನಘೋರ, ಕಠಿಣತೆಯ
ತೋರುವ ಹರಿಕಾರ
ಸಿಹಿಕಹಿಯ ಮೆಲುಕು ಮಾಡುವವು ಮನವ ಹದ
ನೆನಸುವಾಗಲೂ ಬೇಕು ಆಯ್ಕೆ
ಕಠಿಣತೆಯ ಸೂಸುತ್ತ, ಕಹಿ ನೆವವನ್ನೆ ಕೆದಕುತ್ತ
ನಮ್ಮ ಅಹಮ್ಮನ್ನು ತಣಿಸಬೇಕೆ?
ಹೌದು, ಏನು... ನೆನಪೆಂದರೆ?
ನೆನಪಾಗುತ್ತಿಲ್ಲ!!!
No comments:
Post a Comment