ಗಣಕ ಯಂತ್ರದ ಮಣಿಗಳೊಡನೆ
ಅನುದಿನವೂ ಭಾವಯಾನ
ಹೆಸರೇ ತಿಳಿಯದ ಹೊಸಕವಿಗಳ
ಕವನ ಜಾತ್ರೆಯಲಿ
ಕಾಲನ ಚಲನೆಯ ಪರಿವೆಯೂ
ಆಗದಂತೆದುರುನಿಲ್ಲುವ ಈ ರಸ ನಿಮಿಷಗಳಿಗೆ ಏನು ಹೆಸರಿಡಲಿ?
ಕೇವಲ ಸಂತಸವೇ? - ಅಲ್ಲ
ಆತ್ಮತೃಪ್ತಿ - ಅದೂ ಅಲ್ಲ
ಅವೆಲ್ಲವನ್ನೂ ಮೀರಿದ ಮನಸ್ಸಿನಾಳಕ್ಕಿಳಿಯುವ
ಮಧುರಾನುಭೂತಿ.
ಅನುಭಾವ ಅನುಭೂತಿಗಳಿಗೂ ಹೆಸರಿಡುವುದಾದರೆ
ಈ ಮನೋಲ್ಲಾಸಕ್ಕೆನು ಹೆಸರು? - ಗೊಂದಲದಲ್ಲಿದ್ದೆ.
ಹೆಸರುಸಿರಿನ ಕೆಸರಿನಲ್ಲಿ ನೀನು ಕೊಸರಾಡುತ್ತಿರು
ಎಂದು ಸರಿದ ಕಾಲನು ಮಾತ್ರ ಕೀಲಿಮಣೆಗಳ ಲೆಕ್ಕಕ್ಕೆ
ಈ ಗಣಕದ ಗುಣಿತಕ್ಕೆ ದಕ್ಕಲೇ ಇಲ್ಲ!!!
ಅನುದಿನವೂ ಭಾವಯಾನ
ಹೆಸರೇ ತಿಳಿಯದ ಹೊಸಕವಿಗಳ
ಕವನ ಜಾತ್ರೆಯಲಿ
ಕಾಲನ ಚಲನೆಯ ಪರಿವೆಯೂ
ಆಗದಂತೆದುರುನಿಲ್ಲುವ ಈ ರಸ ನಿಮಿಷಗಳಿಗೆ ಏನು ಹೆಸರಿಡಲಿ?
ಕೇವಲ ಸಂತಸವೇ? - ಅಲ್ಲ
ಆತ್ಮತೃಪ್ತಿ - ಅದೂ ಅಲ್ಲ
ಅವೆಲ್ಲವನ್ನೂ ಮೀರಿದ ಮನಸ್ಸಿನಾಳಕ್ಕಿಳಿಯುವ
ಮಧುರಾನುಭೂತಿ.
ಅನುಭಾವ ಅನುಭೂತಿಗಳಿಗೂ ಹೆಸರಿಡುವುದಾದರೆ
ಈ ಮನೋಲ್ಲಾಸಕ್ಕೆನು ಹೆಸರು? - ಗೊಂದಲದಲ್ಲಿದ್ದೆ.
ಹೆಸರುಸಿರಿನ ಕೆಸರಿನಲ್ಲಿ ನೀನು ಕೊಸರಾಡುತ್ತಿರು
ಎಂದು ಸರಿದ ಕಾಲನು ಮಾತ್ರ ಕೀಲಿಮಣೆಗಳ ಲೆಕ್ಕಕ್ಕೆ
ಈ ಗಣಕದ ಗುಣಿತಕ್ಕೆ ದಕ್ಕಲೇ ಇಲ್ಲ!!!
ಅರ್ಥವಾಗಲಿಲ್ಲ,ಅರ್ಥೈಸುವಿರಾ?
ReplyDeleteಹೆಸರುಸಿರಿನ ಕೆಸರಿನಲ್ಲಿ ನೀನು ಕೊಸರಾಡುತ್ತಿರು
ಎಂದು ಸರಿದ ಕಾಲನು ಮಾತ್ರ ಕೀಲಿಮಣೆಗಳ ಲೆಕ್ಕಕ್ಕೆ
ಈ ಗಣಕದ ಗುಣಿತಕ್ಕೆ ದಕ್ಕಲೇ ಇಲ್ಲ!!!
ಈಗ್ಗೆ ಎರಡು ವರ್ಷಗಳ ಕೆಳಗೆ ಅಂತರ್ಜಾಲದಲ್ಲಿ ಬಹಳಷ್ಟು ಸಮಯ ಬೇರೆ ಬೇರೆ ಬ್ಲಾಗ್ ಗಳನ್ನು ಓದುವುದರಲ್ಲೇ ಕಳೆಯುತ್ತಿದ್ದೆ. ಆ ಸಮಯದಲ್ಲಿ ಬರೆದ ಕವನವಿದು. ಎಷ್ಟು ಜನ ಹೊಸ ಹೊಸ ಕವಿಗಳು, ಕಥೆಗಾರರು ಕನ್ನಡದಲ್ಲಿ ! ಆ ಸಂತಸದಲ್ಲಿ ತಾನಾಗೆ ಬಂದ ಸಾಲುಗಳು. ಹೀಗೆ ಗೀಚುವಾಗ ನನಗೆ ಪ್ರಾಸ ಪದಗಳು ಹಿಡಿತಕ್ಕೆ ಸಿಗುವುದಿಲ್ಲ. ನಾನು ಗಣಕಯಂತ್ರದ ಮೂಲಕ ಅಂತರ್ಜಾಲದಲ್ಲಿ ಕಳೆದ ಕಾಲವೆಷ್ಟು ಎಂದು ಯೋಚಿಸ ಹೊರಟಾಗ ಉತ್ತರ ದೊರೆಯಲಿಲ್ಲ, ಕಳೆದ ಕಾಲದ ಲೆಕ್ಕ ಗಣಕಯಂತ್ರಕ್ಕೂ ದಕ್ಕಲಿಲ್ಲ ಎಂದು ಹೇಳಹೊರಟಿದ್ದೆ ಅಲ್ಲಿ. ನಿಮ್ಮಲ್ಲಿ ಗೊಂದಲ ಮೂಡಿಸಿದ್ದರೆ ಕ್ಷಮೆಯಿರಲಿ. - ವಸು
Delete